ಮುದಗಲ್ಲ ಕೋಟೆ

07:44
           ವಿಜಯ ನಗರದ ಪೂರ್ವದಲ್ಲಿಯೇ ಆನೆಗುಂದಿ, ಕಮ್ಮಟದುರ್ಗ ಕೋಟೆಗಳ ಸಮಕಾಲಿನಲ್ಲಿ ದೇವಗಿರಿ ಯಾದವರ ಕಾಲದಲ್ಲಿ ನಿರ್ಮಾಣಗೊಂಡ ಎರಡು ಸುತ್ತಿನ ಮುದಗಲ್ಲ ಕೋಟೆ ವಿಜಯ ನಗರದ ಸಾಮ್ರಾಜ್ಯದ ಉಳ್ಳಿ ಅಬ್ಯುದಯ ಪತನಕ್ಕೆ ನಾಂದಿ ಹಾಕಿರುವುದು ನಗರವು ಅತೀ ಪ್ರಾಚೀನ ಹಾಗೂ ಐತಿಹಾಸಿಕ ಭವ್ಯ ಪರಂಪರೆ ಹೊಂದಿದ ಪಟ್ಟಣವಾಗಿದೆ. ಈಕೋಟೆ ಸುತ್ತಲೂ ಬೆಟ್ಟಗುಡ್ಡಗಳ ಸಾಲುಗಳಿಂದ ಆವರಿಸಿ ದುರ್ಗಮವಾಗಿ ನಿಸರ್ಗ ರಮಣೀಯವಾಗಿದೆ. ಇಲ್ಲಿನ ಪರಂಪರೆ ಪ್ರಕಾಶನ ಸ್ಪೂರ್ತಿದಾಯಕ ಕರ್ನಾಟಕ ಐತಿಹಾಸಿಕ ಶಿಲ್ಪ ಕಲೆಯ ಪ್ರತೀಕವಾಗಿದೆ. ಅಲ್ಲದೇ ಅಗನಿತ ಶಿಲಾ ಶಾಸನಗಳ ಬೀಡಾಗಿದೆ. ಮುದಗಲ್ಲ ಕೋಟೆಯ ಪ್ರದೇಶವು ವಿಜಯ ನಗರ ಸಾಮ್ರಾಜ್ಯದ ಕಾಲದಲ್ಲಿ ಫಲವತ್ತಾದ ಭೂಮಿಯನ್ನು ಹೊಂದಿ ಉಪದೊರೆ ಪ್ರದೇಶವೆಂದು ಪ್ರಸಿದ್ಧ ಪಡೆದಿದೆ ಆಯಾ ಕಟ್ಟಿನ ಸ್ಥಳದಲ್ಲಿ ಇದ್ದ ಕಾರಣ ಕೋಟೆಯ ಯಾವಾಗಲೂ ವಿವಾದಾತ್ಮಕವಾಗಿ ಆಗಿನ ಯುದ್ಧಗಳನ್ನು ಕಂಡಿದೆ. ವಿಜಯ ನಗರ ಸಾಮ್ರಾಜ್ಯವನ್ನು ಪ್ರವೇಶಿಸಬೇಕದರೆ ಮುದಗಲ್ಲ ಕೋಟೆಯನ್ನು ಗೆದ್ದುಕೊಂಡು ಬರಬೇಕಾಗಿರುವುದರಿಂದ ಇದು ವಿಜಯ ನಗರದ ಹೆಬ್ಬಾಗಿಲಾಗಿದೆ. ಕೋಟೆಗೆ ಸಮೀಪದಲ್ಲಿರುವ ಕೃಷ್ಣಾ ನದಿಯ ಉತ್ತರದಲ್ಲಿ ಮಹ್ಮದೀಯರ ಐದು ರಾಜ್ಯಗಳಿದ್ದವು. ಬರಿದಶಾಶಹಿ ಗೊಲ್ಕೊಂಡದ ಸ್ವಭಾಮಶಾಹಿ ಬರಾರ ಶಾಹಿಗಳು ತಲೆ ಎತ್ತಿ ನಿಂತಿದ್ದವು. ಇತ್ತಕಡೆ ತುಂಗಭದ್ರ ನದಿಯ ದರ್ಪಣಕ್ಕೆ ವಿಜಯ ನಗರ ಸಾಮ್ರಾಜ್ಯ ಎದ್ದುದರಿಂದ ಯಾವಾಗಲೂ ಮುದಗಲ್ಲ ಕೋಟೆಯ ಸಲುವಾಗಿ ಎಡಬಿಡದೆ ಹಕ್ಕು ಬುಕ್ಕರಿಂದ ಹಿಡಿದ ಅರವಿಡು ರಾಮರಾಯನ ಕಾಲದ ವರೆಗೆ ಯುದ್ಧಗಳು ಸಂಭವಿಸುತ್ತಾ ಬಂದಿವೆ ಅವುಗಳಲ್ಲಿ (ಹದಿಮೂರು) 13 ಮಹಾಯುದ್ಧಗಳು ಪ್ರಸಿದ್ಧ ಪಡೆದಿವೆ. ಕೊನೆಯ ಯುದ್ದವು 1595ರಲ್ಲಿ ವಿಜಯ ನಗರ ಸಾಮ್ರಾಜ್ಯದ ಅರವಿಡು ರಾಮರಾಯನಿಗೆ ಹಾಗೂ ಬಿಜಾಪುರದ ಅಲಿಆದಿಲ್ ಶಾಹಿ ಮತ್ತು ಮುಸಲ್ಮಾನ ರಾಜರ ಬುಕ್ಕಿ ಮಗಳೊಂದಿಗೆ ರಕ್ಕಸ ತಂಗಡಿಯಲ್ಲಿ ನಡೆದ ಪ್ರಳಯಾಂತರ ಮಹಾಯುದ್ಧದಲ್ಲಿ ರಾಮರಾಯನು ಮಡಿದು ವಿಜಯ ನಗರ ಸಾಮ್ರಾಜ್ಯ ಪತನಗೊಂಡು ಕೋಟೆಯೂ ಅಲಿಆದಿಲ್ ಶಾಹನ ವಶವಾಗಿ ವಿಜಯ ನಗರ ಪಥನಕ್ಕೆ ನಾಂದಿಯೂ ವಿಷಾದನಿಯ, ಆದಿಲ್ ಶಾಹಿಯ ಆಡಳಿತದ ನಂತರ ಮುದಗಲ್ಲು ಒಂದು ನೂರು ವರ್ಷ ಮೀರಿ ಕಲಾಲ ನವಾಬ ಇವರ ಜಾಗೀರಿಯಾಗಿತ್ತು ಈತನಿಗೆ ಒಬ್ಬ ಮಗ ಇಮಂತಿಯಾಜ ಉಲ್ಲ್ ದಾವಲ್ ಹುಟ್ಟಿದ ಕಾರಣ ಪರಾಗನ ಮಸ್ಕಿ ಹಾಲೂ ಮಸರಿನ ಸಲುವಾಗಿ ಜಾಹಗೀರ ಹಾಕಿ ಕೊಟ್ಟಿದ್ದಂತು 1686 ಇಸ್ವಿಯಲ್ಲಿ ಮೊಗಲ ಬಾದಶಾಹಿ ಔರಂಗಜೇಬನು ಬಿಜಾಪುರ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು ಮುದಗಲ್ಲ ಕೊಟೆಯಲ್ಲಿ ತನ್ನ ಪ್ರತಿನಿಧಿಯನ್ನು ಇಟ್ಟದ್ದನೆಂದು ತಿಳಿದು ಬರುವುದು 1707 ಇಸವಿಯಲ್ಲಿ ಔರಂಗಜೇಬನು ಮೃತ ಪಟ್ಟ ನಂತರ 1703 ವರೆಗ ಮುಲಿಜ್ ದಕ್ಕನ್ ಬಾದ್ದೋರ ಷಾ, ಚಾಹವರ ಷಾ, ಫರಕಫರಿ ಷಾ, ಮಹಮ್ಮದ ಷಾ, ಇವರ ಕಬ್ಜಾದಲ್ಲಿ ಬಂದಿತು ಮಹ್ಮದ್ ಷಾ ನಂತರ 30ನೇ ಅಕ್ಟೋಬರ 1763 ಇಸವಿಯಲ್ಲಿ ಹೈದ್ರಾಬಾದನ ನಿಜಾಮ ಉಲ್ ಮೂಲಕ ಅನೀವಜಾ ಸೂಬೆದರಿ ದಕ್ಕನ ಮೇಲೆ ವಾಪಸಾಯಿತು ಅಲ್ಲಿಂದ ನಿರಂತರ ನಿಜಾಮ ನವಾಬನ ವಶದಲ್ಲಿದೆ. 21ನೇ ಮೇ 1853 ಇಸವಿಯಲ್ಲಿ ಅನರೇಬಲ್ಲ ದಿ ಇಂಗ್ಲೀಷ ಇಸ್ಟ ಇಂಡಿಯಾ ಕಂಪನಿ ಮತ್ತು ನಿಜಾಮ ಉಲ್ ಮೂಲಕ ಆಸೀಫ್ ಜಾ ಬಹದ್ದೂರ ಇವರ ನಡುವಿನ ಸಂದಾನ ಪ್ರಕಾರ ದೋಆಬ ರಾಯಚೂರು ಮತ್ತು ಮುದಗಲ್ಲ ಪ್ರದೇಶ ಜಮೀಯ ಕಂಟೋನಮೆಂಟ ಕರನಲ್ ಲೂ ಸಾಹೇಬ್ ಬ್ರೀಟೀಷ ಗೌರ್ನಮೆಂಟ ಇತ ತನಖಾಸ ನಿಮಿತ್ಯ ಆತನ ಸು ವರದಿಯಾಯಿತು ಹಿಂದಿನ ಸಂದಾನ ಪ್ರಕಾರ ವಿಕ್ಟೋರಿಯ ಮಹಾರಾಣಿ ದಿ : 19 ಡಿಸೆಂಬರ 1860 ಇಸವಿಯಲ್ಲಿ ಕರನಲ್ಲ ಡೆವಿಡ ಸನ್ ಬಹದ್ದೂರ ಕೆಜಮೆಂಟ್ ಇತನಿಂದ ದೇಆಬ್ ಪ್ರದೇಶವನ್ನು ಗೌರ್ನಮೆಂಟ್ ನಿಜಾಮ ಸರ್ಕಾರಕ್ಕೆ ಕೊಡಲಾಯಿತು ತನಕಾದ ನಿಮಿತ್ಯವಾಗಿ ಕಂಟೋನಮೆಂಟ ಪ್ರಕಾರ ರಾಜ್ಯವನ್ನು ತೆಗೆದುಕೊಂಡಿದು ಎಂದು ನಿಜಾಮ ಶಾಹಿ ಗೆಜೌಡರಿಯಲ್ಲಿ ಉಲ್ಲೇಖವಿದೆ. 1948 ವರೆಗೆ ನಿಜಾಮನ ಆಡಳಿತಕ್ಕೊಳಪಟ್ಟಿತು.  

0 comments:

Post a Comment

Total Pageviews

Recent Posts

Find us on Facebook